kannada lyrics
ಅರೆರೆರೆರೆರೆ ಗಿಣಿ ರಾಮ
ಅರೆರೆರೆರೆ ಗಿಣಿ ರಾಮ
ಹೊಯ್ ಪಂಚರಂಗಿ ರಾಮ
ಅರೆರೆರೆ ಗಿಣಿ ರಾಮ
ಹೊಯ್ ಪಂಚರಂಗಿ ರಾಮ
ಮಾತಾಡೋ
ಮಾತಾಡೋ ಮುದ್ದು ಗಿಣಿರಾಮ
ಆಹಾ ಮಾತಾಡು ನನ್ನ ಪುಟ್ಟ ರಾಮ
ನಿನ್ನಾಸೆ ನನಗೈತೆ ನಿನಮ್ಯಾಲೆ ಮನಸೈತೆ
ನಿನ ಕಂಡು ನಾ ಸೋತೆ ರಾಮ
ನನ್ನ ಬಿಟ್ಟೋಡಾ ಬ್ಯಾಡಯ್ಯ ರಾಮ
ಅರೆರೆರೆರೆ ಗಿಣಿ ರಾಮ
ಹೊಯ್ ಪಂಚರಂಗಿ ರಾಮ
ಮಾತಾಡೋ ಮುದ್ದು ಗಿಣಿರಾಮ
ಒಂದು ಮಾತಾಡು ನನ್ನ ಪುಟ್ಟ ರಾಮ
ನೆನೆತನಕ ಹಿಂಗಿಲ್ಲ ನಾನು ನಾನಾಗಿಲ್ಲ
ನೆನೆತನಕ ಹಿಂಗಿಲ್ಲ ನಾನು ನಾನಾಗಿಲ್ಲ
ನಿಂತಲ್ಲೇ ನಿಲಲಾರೆ ನಲ್ಲ
ಈ ತಳಮಳವ ನಾ ತಾಳೇನಲ್ಲ
ಮನ ಹಿಗ್ಗಿ ಹಗುರಾಗಿ ತನುವಾಗೇ ಕೆಂಪಾಗಿ
ಮೈ ಬಟ್ಟೆ ಬಿಗಿಯಾಗಿ ರಾಮ
ನನ್ನ ಎದೆ ಭಾರವಾಯ್ತಲ್ಲ ರಾಮ
ಆಹಾ ಇರಲಾರೆ
ಇನ್ನು ಇರಲಾರೆ ನಿನ್ನ ಬಿಟ್ಟು ರಾಮ
ಒಂದು ಮಾತಾಡು ನನ್ನ ಪುಟ್ಟ ರಾಮ
ಸಣ್ಣಾದ ನಡು ಹಿಂಗೆ ಆಡ್ಯಾಡಿ ಕುಣಿದಂಗೆ
ಸಣ್ಣಾದ ನಡು ಹಿಂಗೆ ಆಡ್ಯಾಡಿ ಕುಣಿದಂಗೆ
ಮೈಯೆಲ್ಲಾ ಜುಮ್ ಎಂದು ನಂಗೆ
ನಿನ್ನ ತಬ್ಬಿ ಕುಂತಿರುವಾಸೆ ಹಿಂಗೇ
ಮುಂಜಾನೆ ಮಂಜಿರಲಿ ನೀರಲ್ಲೇ ಮುಳುಗಿರಲಿ
ಬಿಸಿಯುಸಿರ ಕಾವಿಂದ ರಾಮ
ಮೈ ಬಾಡಿದ ಹೂವಾಯ್ತೋ ರಾಮ
ಉಹ್ಹು ಬಿಡಲಾರೆ
ನಿನ್ನ ಬಿಡಲಾರೆ ಬಂಗಾರ ರಾಮ
ಒಂದು ಮಾತಾಡು ನನ್ನ ಪುಟ್ಟ ರಾಮ
ನಿನ್ನಾಸೆ ನನಗೈತೆ ನಿನಮ್ಯಾಲೆ ಮನಸೈತೆ
ನಿನ ಕಂಡು ನಾ ಸೋತೆ ರಾಮ
ನನ್ನ ಬಿಟ್ಟೋಡಾ ಬ್ಯಾಡಯ್ಯ ರಾಮ
ಅರೆರೆರೆರೆ ಗಿಣಿ ರಾಮ
ಹೊಯ್ ಪಂಚರಂಗಿ ರಾಮ
ಅರೆರೆರೆ ಗಿಣಿ ರಾಮ
ಹೊಯ್ ಪಂಚರಂಗಿ ರಾಮ
ಮಾತಾಡೋ ಮುದ್ದು ಗಿಣಿರಾಮ
ಒಂದು ಮಾತಾಡು ನನ್ನ ಪುಟ್ಟ ರಾಮ
ಲಾಲಾ ಲ ಲಾ ಲಾ ಲ ಲಾಲಾ
ಆಹಾ ಲಾಲಾಲ ಲಾ ಲ ಲ ಲಾಲಾ
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }