Haago Heego Song Lyrics


Movie:  Sarathi
Music : Harikrishna
Vocals :  Harikrishna
Lyrics :   Nagendra Prasad. 
Year: 2011
Director: Dinakar
 

kannada lyrics

ಚಂದ್ರ ನಿನ್ ಕನಸಿಗ್ ಬಂದ್ರೆ
ಸೇರಿಸ್ಬೇಡ, ಅಲ್ಲಿ ನಾನಿರ್ತೀನಿ
ಕಾಮನಬಿಲ್ಲು ನಿನ್ ರಂಗು ಕೇಳಿದ್ರೆ
ಕೊಡ್ಬೇಡ, ನಾನ್ ಮಾಸೋಗ್ತಿನಿ
ಜೀವನದಲ್ಲಿ ಏನೆ ಆದ್ರು ತಲೆಗ್ ಹಚ್ಕೋಬೇಡ
ಯಾಕೆಂದ್ರೆ ನಾನ್ ನಿನ್ ಹಚ್ಕೊಂಡಿದೀನಿ

ಹಾಗೋ ಹೀಗೋ
ಇದ್ದೆ ನಾನು
ನನ್ನ ಪಾಡು
ಹಾಯಾಗಿ

ಕಣ್ಣ ಮುಂದೆ
ಬಂದೆ ನೀನು
ಹೋದೆ ನಾನು
ಹಾಳಾಗಿ

ಒಳಗೆ ಬರಲೇ
ಅಂತ ಕೇಳೋ
ಸೌಜನ್ಯನೆ ಇಲ್ಲ ನಿನಗೆ
ನೀನಾಗಿಯೇ
ನುಗ್ಗಿ ನುಗ್ಗಿ ನುಗ್ಗಿ ಬಂದೆ

ಹಾಗೋ ಹೀಗೋ
ಇದ್ದೆ ನಾನು
ನನ್ನ ಪಾಡು
ಹಾಯಾಗಿ

ಕಣ್ಣ ಮುಂದೆ
ಬಂದೆ ನೀನು
ಹೋದೆ ನಾನು
ಹಾಳಾಗಿ

ನಿನ್ ಗೆಲ್ಲೊ ಹಟದಲ್ಲಿ
ನನ್ ಹೃದಯಾನೆ ಸೋತೋಯ್ತು
ಬೇಜಾರಿಲ್ಲ

ನಿನ್ ಹೆಸರು ಬರೀತಾ ಬರೀತಾ
ನನ್ ಹೆಸರೇ ಮಾರ್ತೋಯ್ತು
ಪರವಾಗಿಲ್ಲ

ನಿನ್ ನೋಡಿದ್ ಕ್ಷಣದಿಂದ
ನನ್ ಬದುಕೇ ಬದಲಾಯ್ತು
ತಪ್ಪೇನಿಲ್ಲ

ನಿನಗೋಸ್ಕರ ಎಷ್ಟು ಜನ್ಮ ಬೇಕಾದ್ರೂ ಎತ್ತ್ ಬರ್ತೀನಿ
ಮುಲಾಜೇ ಇಲ್ಲ

ಖಾಲಿನೆ ಕುಂತಿದ್ದೆ
ಕಾಲನ ನೂಕಿದ್ದೆ
ಅದ್ಯಾವಾಗಾಯ್ತೋ ನಿನ್ನ ಪರಿಚಯ

ನೀನಾಗಿ ತಳ್ಳಿದ್ದೋ
ನಾನಾಗಿ ಬಿದ್ದಿದ್ದೋ
ಪ್ರೀತಿಯ ಕೆಟ್ಟ ತುಂಬ ತಾಪತ್ರಯ

ಹೆಣ್ತತನ ಜುರುಗಿತು
ಎದೆ ಕದ ಕದಲಿತು
ಸಲಾಮಿದೆ ತಗೋ ಪ್ರಿಯ

ಹಾಗೋ ಹೀಗೋ
ಇದ್ದೆ ನಾನು
ನನ್ನ ಪಾಡು
ಹಾಯಾಗಿ

ಕಣ್ಣ ಮುಂದೆ
ಬಂದೆ ನೀನು
ಹೋದೆ ನಾನು
ಹಾಳಾಗಿಬದ್ಕಿದ್ದಾಗ ಮುಂತಾಜ್ಗು ಗೊತ್ತಿರ್ಲಿಲ್ಲ
ಅವಳ ಗೋರಿ ತಾಜ್ಮಹಲ್ ಆಗುತ್ತೆ ಅಂತ
ಸತ್ತ ಮೇಲೆ ಶಹಜಾನ್ಗು ಗೊತ್ತಾಗ್ಲಿಲ್ಲ
ಎಷ್ಟೋ ಪ್ರೀತಿಗೆ ಆ ಗೋರಿ ಸ್ಪೂರ್ತಿ ಆಗುತ್ತೆ ಅಂತ
ನಾನ್ ಶಹಜಾನ್ ಅಲ್ಲ ನೀನ್ ಮುಮ್ತಾಜ್ ಅಲ್ಲ
ಆದರು ನಮ್ ಪ್ರೀತಿ ಅವ್ರಿಗಿಂತೇನೂ ಕಮ್ಮಿ ಇಲ್ಲ

ಕೊಟೇನ ಕಟ್ತೀಯೋ ಜೋಪಡಿಲೇ ಇಡ್ತಿಯೋ
ನಾನಂತು ಈಗ ನಿನ್ನೆ ನಂಬಿಕೊಂಡೇ
ಮಾತನ್ನೇ ಕೊಡ್ತಿಯೋ ಕೊಟ್ಟಂತೆ ಕಾಯ್ತಿಯೋ
ಬೇರೇನೂ ಬೇಕಾಗಿಲ್ಲ ನೆಚ್ಚಿಕೊಂಡೆ
ತನುವಿದು ಗಡ ಗಡ ಮನದಲ್ಲಿ ಮಂಪಡ
ಸಲಾಮಿದೆ ತಗೋ ಪ್ರಿಯ

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ

Leave a Comment