Jokae Kannada Song Lyrics


Movie:  KGF 1
Music : Ravi Basrur
Vocals :  Airaa Udupi
Lyrics :   Chi. Udayashankar And R N Jayagopal
Year: 2018
Director: Prashanth Neel
 

kannada lyrics

ಹೇಯ ಜೋಕೆ… ನಾನು ಬಳ್ಳಿಯ ಮಿಂಚು

ಕಣ್ಣು ಕತ್ತಿಯ ಅಂಚು

ಬಲೆಗೆ ಬಿದ್ದಾಗ ನೀ

ಅರಿವೇ ಈ ಸಂಚು

ಜೋಕೆ… ನಾನು ಬಳ್ಳಿಯ ಮಿಂಚು

ಕಣ್ಣು ಕತ್ತಿಯ ಅಂಚು

ಬಲೆಗೆ ಬಿದ್ದಾಗ ನೀ

ಅರಿವೇ ಈ ಸಂಚು

ಸೊಂಟ ಬಳಕುವಾಗ

ಉಯ್ಯಾಲೆ ಆಡುವಾಗ

ಉಲ್ಲಾಸ ಪಡು ನೀ ಆಗ

ತುಂಟ ನಗೆಯ ಬಾಣ

ನೆಟ್ಟಾಗ ನಿಂಗೆ ಜಾಣ

ನೀ ನನ್ನ ಬಂದಿ ಆವಾಗ

ಸೊಂಟ ಬಳಕುವಾಗ

ಉಯ್ಯಾಲೆ ಆಡುವಾಗ

ಉಲ್ಲಾಸ ಪಡು ನೀ ಆಗ

ತುಂಟ ನಗೆಯ ಬಾಣ

ನೆಟ್ಟಾಗ ನಿಂಗೆ ಜಾಣ

ನೀ ನನ್ನ ಬಂದಿ ಆವಾಗ

ಚಂದದ ಕೆಂದುಟಿ ಜೇನು ಹೀರುವ ದುಂಬಿ ಆಗುವ

ಆದರೆ ನಂತರ ಮತ್ತು ಬಂದರೆ

ನಿಧಾನ ನಿಧಾನ

ಜೋಕೆ… ನಾನು ಬಳ್ಳಿಯ ಮಿಂಚು

ಕಣ್ಣು ಕತ್ತಿಯ ಅಂಚು

ಬಲೆಗೆ ಬಿದ್ದಾಗ ನೀ

ಅರಿವೇ ಈ ಸಂಚು

ಏನು ಹುಡುಕುವೆ ನೀನು

ನನ್ನಂದ ನೋಡಿ ಏನೋ

ನನಗಿಂತ ರತಿ ಬೇಕೇನೋ

ಹೆಜ್ಜೆ ಇಡುವ ಮುನ್ನ

ನೀ ನೋಡು ಒಮ್ಮೆ ನನ್ನ

ಸನ್ನೆಯ ತಿಳಿ ಓ ಚಿನ್ನ

ಏನು ಹುಡುಕುವೆ ನೀನು

ನನ್ನಂದ ನೋಡಿ ಏನೋ

ನನಗಿಂತ ರತಿ ಬೇಕೇನೋ

ಹೆಜ್ಜೆ ಇಡುವ ಮುನ್ನ

ನೀ ನೋಡು ಒಮ್ಮೆ ನನ್ನ

ಸನ್ನೆಯ ತಿಳಿ ಓ ಚಿನ್ನ

ಎಚ್ಚರ ಎಚ್ಚರ ದೀಪವಾರಿದೆ ಕತ್ತಲಾಗಿದೆ

ಬಲ್ಲೆಯಾ ಜಾಲದಿ ತಬ್ಬಿ ಓಡುವ ನಿಧಾನ ನಿಧಾನ

ಜೋಕೆ… ನಾನು ಬಳ್ಳಿಯ ಮಿಂಚು

ಕಣ್ಣು ಕತ್ತಿಯ ಅಂಚು

ಬಲೆಗೆ ಬಿದ್ದಾಗ ನೀ

ಅರಿವೇ ಈ ಸಂಚು

Leave a Comment