Nana Mele Nanageega Lyrics


Movie:  Kannadakkagi Ondannu Otti
Music : Arjun Janya
Vocals :  Sonu Nigam
Lyrics :   Arjun Janya
Year: 2018
Director: Kushal
 

kannada lyrics

ನನಮೇಲೆ ನನಗೀಗ ಅನುಮಾನ ಶುರುವಾಗಿದೆ

ಬಡಪಾಯಿ ಎದೆಯಲ್ಲಿ ಒಲವೀಗ ಮನೆಮಾಡಿದೆ

ಸನ್ನೆಯಲ್ಲಿ ಏನೇನೋ ಹೇಳುವಾಗ

ಎಲ್ಲ ಮಾತು ನನ್ನಲ್ಲೆ ಬಾಕಿ ಈಗ

ಸರಿಹೋಗುವ ಮುನ್ಸೂಚನೆ

ಇತ್ತೀಚೆಗೆ ಸುಳಿದಾಡಿದೆ

ನನಮೇಲೆ ನನಗೀಗ ಅನುಮಾನ ಶುರುವಾಗಿದೆ

ಭೇಟಿಯಾದ ಜಾಗ ನಮ್ಮನ್ನೆ ಕಾಯುವಾಗ

ಏಕಾಂತವೀಗ ನನ್ನ ಕಾಡಿದೆ

ಒಂದೇ ಒಂದು ಮಾತು ನೀ ಚಂದವಾಗಿ ಆಡಿ

ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ

ಉಸಿರಿನ ಬಿಸಿಯು ತಗುಲಿದ ಮೇಲೆ

ಹುಡುಗನ ಪಾಡು ಹೀಗಾಗಿದೆ

ಪದ ಗೀಚುವ ಬೆರಳೆಲ್ಲವೂ

ಪದವಿಲ್ಲದೆ ಪರದಾಡಿದೆ

ಇನ್ನೇಕೆ ಕಾಲಹರಣ

ದೂರಾನೇ ತುಂಬ ಕಠಿಣ

ಕಣ್ಣಲ್ಲೆ ನೀಡು ಎಲ್ಲಾ ಸೂಚನೆ

ಎಲ್ಲೇ ಹೋದರೂನು, ನೀ ಎಲ್ಲೇ ಬಂದರೂನು

ನನಗೀಗ ನಿನ್ನದೊಂದೇ ಪ್ರಾರ್ಥನೆ

ಜೀವದ ಭಾಷೆ ಹೇಳಲು ನನಗೆ

ಜೀವವೆ ಹೋದ ಹಾಗಾಗಿದೆ

ಅನುರಾಗದ ಅನುವಾದಕೆ

ಸರಿಹೋಗುವ ಪದವೆಲ್ಲಿದೆ

ನನಮೇಲೆ ನನಗೀಗ ಅನುಮಾನ ಶುರುವಾಗಿದೆ

Leave a Comment