kannada lyrics
ನನ್ನವಳೆ ನನ್ನವಳೆ ಪ್ರೀತಿಸು ಅಂದವಳೆ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೆ
ಬೇರೇನೂ ಬೇಕಿಲ್ಲ ನೀನೆ ವರ ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ ಮಾತಲ್ಲೇ ಏಳು ಸ್ವರ
ಆನಂದದ ಆಲಾಪನ ಸನಿಹ ರೋಮಾಂಚನ
ನನ್ನವಳೆ ನನ್ನವಳೆ ಪ್ರೀತಿಸು ಅಂದವಳೆ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೆತಂಗಾಳಿ ತಬ್ಬಲು ನಾನು ತೆರೆದೆ ಕೈಯನ್ನು
ಕಣ್ಬಿಟ್ಟು ನೋಡಿದರಿಲ್ಲಿ ಕಂಡೆ ನಿನ್ನನು
ತಿಂಗಳ ಬೆಳಕಿನಂತೆ ಹೊಳೆವ ಕಂಗಳು
ಮುಗಿಲಿನಾಚೆ ನಿಂತೆ ನಿನ್ನೆ ನೋಡಲು
ನೀನು ನನ್ನ ಒಪ್ಪಲು ಒಮ್ಮೆ ಮೆಲ್ಲ ತಬ್ಬಲು
ಎಂಥ ಸಿಹಿ ಕಲ್ಪನೆ ನಿನ್ನದೇ ಯೋಚನೆ
ನಿನ್ನಿಂದಲೇ ಹೀಗಾದೆನ ಸನಿಹ ರೋಮಾಂಚನ
ನನ್ನವಳೆ ನನ್ನವಳೆ ಪ್ರೀತಿಸು ಅಂದವಳೆ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೆ
ತಿರುಗಿ ನೋಡೇ ನೀನೊಮ್ಮೆ ನನ್ನ ಸನ್ನೆಯ
ನಿನಗಾಗಿ ಕಟ್ಟುವೆ ನಾನು ಹೊಸ ನಾಳೆಯ
ಗುನುಗುತಿರುವೆ ನಾನು ಸ್ವಲ್ಪ ಗಮನಿಸು
ನನ್ನೆಲ್ಲ ಕನಸು ಈಗ ಒಂದು ಗೂಡಿಸು
ನನ್ನ ಹೊಸ ದಾರಿಯ ನಿನ್ನ ಕೈ ರೇಖೆಯ
ನೋಡು ಸ್ವಲ್ಪ ಬೇಗನೆ ನಾನೆ ಬರುತಿರುವೆನೆ
ಇಲ್ಲಿಂದಲೇ ಆಮಂತ್ರಣ ಸನಿಹ ರೋಮಾಂಚನ
ನನ್ನವಳೆ ನನ್ನವಳೆ ಪ್ರೀತಿಸು ಅಂದವಳೆ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೆ
ಬೇರೇನೂ ಬೇಕಿಲ್ಲ ನೀನೆ ವರ ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ ಮಾತಲ್ಲೇ ಏಳು ಸ್ವರ
ಆನಂದದ ಆಲಾಪನ ಸನಿಹ ರೋಮಾಂಚನ
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }