Yaaro Nee lyrics




Movie:  Kavacha
Music : Vyasraj
Vocals :  K Kalyan
Lyrics :   Arjun Janya
Year: 2021
Director: Gvr Vasu
 

kannada lyrics

ಯಾರೋ ನೀ ಯಾರೋ ನೀ ಯಾರೋ ನೀ

ನಿನ್ನೋರೆ ನಿನಗಿಲ್ಲ ಇಲ್ಲಿ

ಒಬ್ಬಂಟಿ ಆಕಾಶ ನೀನೀಗ ತಾರೆಯು ಚುಕ್ಕಿಯು ಎಲ್ಲಿ

ನಿನ್ನ ತ್ಯಾಗ ಧರೆಗೂ ಮಿಗಿಲು

ಕಣ್ಣೀರಾಯ್ತು ನೋಡು ಮುಗಿಲು

ಗುಣದಲಿ ಋಣದಲಿ ರಾಜ ನೀನು ತಿಳಿಲಿಲ್ಲ ಜಗಕೆ

ಯಾರೋ ನೀ ಯಾರೋ ನೀ ಯಾರೋ ನೀ

ನಿನ್ನೋರೆ ನಿನಗಿಲ್ಲ ಇಲ್ಲಿ

ತಾರೆಯು ಚುಕ್ಕಿಯು ಎಲ್ಲಿ

ಕಾಪಾಡೊ ದೇವರಿಗೆ ಕಾರ್ಮೋಡ ಕವಿದಂತೆ

ನೀ ತಾಯದೆ ಮಮತೆಲಿ ಆಗ

ತರಗೆಲೆಯಾದೆ ಮಣ್ಣಲ್ಲಿ ಈಗ

ಬಂಧವೆಲ್ಲ ಬಂಧನವಾಗೋಯ್ತು

ಭಾವನೆಗಳ ಬಾಗಿಲು ಮುರಿದೋಯ್ತು

ಸುಳ್ಳುಗಳು ನಿಜವನ್ನೇ ನುಂಗಿ ನೀರು ಕುಡಿದಾಂಗಾಯ್ತು

ಯಾರೋ ನೀ ಯಾರೋ ನೀ ಯಾರೋ ನೀ

ನಿನ್ನೋರೆ ನಿನಗಿಲ್ಲ ಇಲ್ಲಿ

ತಾರೆಯು ಚುಕ್ಕಿಯು ಎಲ್ಲಿ

ಚೂರಾದ ನಂಬಿಕೆಯ ಜೋಪಾನ ಮಾಡುವೆಯಾ

ಇಲ್ಲಿ ಕಣ್ಣಿದ್ದೂ ಕುರುಡಾದರೂ ಎಲ್ಲ

ನೀ ಕಣ್ಣಿಲ್ಲದೆ ಬೆಳಕಾದೆಯಲ್ಲ

ನೀನು ಸತ್ಯ ನಿನ್ನವರು ಮಿಥ್ಯ

ಆತ್ಮಸಾಕ್ಷಿ ಆಗೋಯ್ತು ಅಂತ್ಯ

ಗಂಡಿನೆದೆ ಗುಂಡಿಗೆಗೆ ಮೊದಲ ಸಾರಿ ಕಣ್ಣು ಕುರುಡಾಯ್ತು

ಯಾರೋ ನೀ ಯಾರೋ ನೀ ಯಾರೋ ನೀ

ನಿನ್ನೋರೆ ನಿನಗಿಲ್ಲ ಇಲ್ಲಿ ನಿನ್ನೋರೆ ನಿನಗಿಲ್ಲ ಇಲ್ಲಿ



Leave a Reply

Your email address will not be published. Required fields are marked *