Banda Banda Megharaja Song lyrics



Movie:  Sipayi
Music : Hamsalekha
Vocals :  S. Janaki
Lyrics :   Hamsalekha
Year: 1996
Director: Ravichandran
 

kannada lyrics

ಓ ಓ ಓ ಓ ಓ ಮೇಘರಾಜನೇ

ನುಡಿ ನುಡಿ

ಓ ಓ ಓ ಓ ಓ ಮೇಘರಾಜನೇ

ನುಡಿ ನುಡಿ

ಬಂದ ಬಂದ ಮೇಘರಾಜ

ನಮ್ಮ ಊರ ಕೆರೆಗೆ

ತಂದ ತಂದ ಜೀವದೆಳೆಯ

ನಮ್ಮ ಊರ ಬೆಳೆಗೆ
ಓ ಓ ಓ ಓ ಓ ಜೀವ ಗಂಗೆಯೇ
ಮಿಂದೆ ಮಿಂದೆ ನಾ
ಸಮಗಸನೀದಮ ಗಳಲಿ
ಬಂದ ಬಂದ ಮೇಘರಾಜ
ನಮ್ಮ ಊರ ಕೆರೆಗೆ

ಮಳೆರಾಯ ನೀನು ಪನ್ನೀರ
ಚೆಲ್ಲಿ ಕರೆದೇ ಧರೆಯ
ಸಂತೋಷದಿಂದ ಧರಣಿ
ನೀ ತೆರೆದೇ ನಿನ್ನ ಹೃದಯ
ಮೈಯೆಲ್ಲಾ ರೋಮಾಂಚನ
ಜಲದ ನೆಲದ ಲಿಂಕನ

ಬಿಡಿಸದ ಬಂಧವೇ
ನಿಮ್ಮದು ಬೆರೆಯುವ ಪಂದ್ಯವೇ
ನೀವಿಬ್ಬರು ಬೆರೆತರೆ
ಸುತ್ತಲೂ ಭಾಗ್ಯದ ಮಣ್ಣಿನ ಗಂಧವೇ

ಬಂದ ಬಂದ ಮೇಘರಾಜ
ನಮ್ಮ ಊರ ಕೆರೆಗೆ
ಓ ಓ ಓ ಓ ಓ ಜೀವ ಗಂಗೆಯೇ
ಮಿಂದೆ ಮಿಂದೆ ನಾ
ಸಮಗಸನೀದಮ ಗಳಲಿ
ಬಂದ ಬಂದ ಮೇಘರಾಜ
ನಮ್ಮ ಊರ ಕೆರೆಗೆ

ಯಾರ್ಯಾರ ಊರ ಮೋಡ
ಅದು ಇಲ್ಲೊ ಅಲ್ಲೋ ಎಲ್ಲೋ
ಮಳೆ ಹಂಚೋ ಮುಗಿಲ ಎದೆಗೆ
ಪದಕ ಕಾಮನಬಿಲ್ಲೋ
ಏನೇನು ಆಶ್ಚರ್ಯವೋ
ಏನೆಲ್ಲಾ ಆನಂದವೋ

ಬಿಂದುವೇ ಸಿಂಧುವೊ
ಇಲ್ಲವೇ ಸಿಂಧುವೆ ಬಿಂದುವೊ
ಈ ಮಾಯದ ಮಳೆಯಲಿ
ಎಲ್ಲವೂ ಮಿಂದವೊ
ದೇವರೇ ಎಂದವೊ

ಬಂದ ಬಂದ ಮೇಘರಾಜ
ನಮ್ಮ ಊರ ಕೆರೆಗೆ
ಓ ಓ ಓ ಓ ಓ ಜೀವ ಗಂಗೆಯೇ
ಮಿಂದೆ ಮಿಂದೆ ನಾ
ಸಮಾಗಸನಿದಮ ಗಳಲಿ
ಬಂದ ಬಂದ ಮೇಘರಾಜ
ನಮ್ಮ ಊರ ಕೆರೆಗೆ

Leave a Comment