MALAYALAM LYRICS COLLECTION DATABASE

Munjane Manjalli Lyrics


Movie:  Just Maath Maathalli
Music : Raghu Dixit
Vocals :  Raghu Dixit
Lyrics :   Raghavendra Kamath
Year: 2010
Director: Sudeepa
 

kannada lyrics

ಮುಂಜಾನೆ ಮಂಜಲ್ಲಿ
ಮುಸ್ಸಂಜೆ ತಿಳಿ ತಂಪಲ್ಲಿ
ಓ ಒಲವೆ ನೀ ಎಲ್ಲಿ?
ಹುಡುಕಾಟ ನಿನಗಿನ್ನೆಲ್ಲಿ?
ನನ್ ಎದೆಯೊಳಗೆ ನೀ ಇಳಿದು
ಜಡ ಮನದ ಮೌನ ಮುರಿದು
ಬಿಸಿ ಉಸಿರನ್ನು ನೀ ಬಗೆದು
ನಿಟ್ಟುಸಿರನ್ನು ನೀ ತೆಗೆದು
ನನ್ನೊಮ್ಮೆ ಆವರಿಸು
ಈ ಬೇಗೆ ನೀ ಹರಿಸು
ಮನದಾಳದ ಉಲ್ಲಾಸ ನೀ..

ಕುಂತಲ್ಲು ನೀನೆ ನಿಂತಲ್ಲೂ ನೀ
ಎಲ್ಲೆಲ್ಲು ನೀನೆ ಸಖಿ!
ಕಣ್ಣಲ್ಲೂ ನೀನೆ ಕನಸಲ್ಲೂ ನೀನೆ
ಎಲ್ಲೆಲ್ಲು ನೀನೆ ಸಖಿ!
ನನ್ನ ನೆನ್ನೆಗಳು ನೀನೆ
ನಾಳೆಗಳು ನೀನೆ
ಎಂದೆಂದೂ ನೀನೆ ಸಖಿ
ಆವರಿಸು.. ಮೈದುಂಬಿ..
ಜಸ್ಟ್ ಮಾತ್ ಮಾತಲ್ಲಿ!

ನನ್ನೆಲ್ಲ ಕನಸನ್ನು
ನಿನದೆಂದು ನೀ ತಿಳಿದಿದ್ದೆ
ನೂರೆಂಟು ನೋವಲ್ಲು
ನೀ ಬಂದು ಜೊತೆಗಿದ್ದೆ
ಕಾರ್ಮೋಡ ಕವಿದ ಮನಕೆ
ಹೊಸ ಬೆಳಕು ತಂದು ಸುರಿದೆ
ನಿನಗಾಗಿ ನಾನು ನನ್ನ
ಬದುಕೆಲ ಮುಡಿಪು ಎಂದೇ
ಈಗೆಲ್ಲಿ ನೀ ಹೋದೆ?
ಕನುಕರಿಸಿ ನೀ ಬಾರೆ
ಎದೆ ಗೂಡಿನ ಉಸಿರು ನೀನೆ

ಭಾನಲ್ಲು ನೀನೆ ಭುವಿಯಲ್ಲು ನೀನೆ
ಎಲ್ಲೆಲ್ಲು ನೀನೆ ಸಖಿ!
ನೋವಲ್ಲು ನೀನೆ ನಗುವಲ್ಲು ನೀನೆ
ಎಲ್ಲೆಲ್ಲು ನೀನೆ ಸಖಿ!
ನನ್ನ ನೆನ್ನೆಗಳು ನೀನೆ
ನಾಳೆಗಳು ನೀನೆ
ಎಂದೆಂದೂ ನೀನೆ ಸಖಿ
ಆವರಿಸು.. ಮೈದುಂಬಿ..
ಜಸ್ಟ್ ಮಾತ್ ಮಾತಲ್ಲಿ!

ನೀನಿಲ್ಲದೆ ಬಾಳೆ ಬರಡು
ನಿನಗಾಗೆ ನನ್ನ ಬದುಕೇ ಮುಡಿಪು
ನೀನಿಲ್ಲದ ಬದುಕೆನಿದು ಕೊಲ್ಲು ನನ್ನ

ತಂಪಲ್ಲು ನೀನೆ ಬಿಸಿಲಲ್ಲೂ ನೀನೆ
ಎಲ್ಲೆಲ್ಲು ನೀನೆ ಸಖಿ!
ಹಸಿರಲ್ಲೂ ನೀನೆ ಉಸಿರಲ್ಲೂ ನೀನೆ
ಎಲ್ಲೆಲ್ಲು ನೀನೆ ಸಖಿ!
ನನ್ನ ನೆನ್ನೆಗಳು ನೀನೆ
ನಾಳೆಗಳು ನೀನೆ
ಎಂದೆಂದೂ ನೀನೆ ಸಖಿ
ಆವರಿಸು.. ಮೈದುಂಬಿ..
ಜಸ್ಟ್ ಮಾತ್ ಮಾತಲ್ಲಿ!

Leave a Comment