kannada lyrics
ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ
ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆಹೂಗಳು ದುಂಬಿಯ ಚುಂಬನದಿಂದ
ಪುಳಕಿತವಾಗಿಹ ಕಾಲ
ಮಧುಮಯ ಯೌವನ ಮೈಮನ ತುಂಬಿ
ಮೆರೆದಿಹ ವಸಂತ ಕಾಲ
ತೀರದ ಆಸೆಯ ಆರದ ಉರಿಯ
ವಿರಹಿಗೆ ತಂದಿಹ ಕಾಲ
ವಿರಹಿಗೆ ತಂದಿಹ ಕಾಲ
ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಬಯಕೆಯು ಅನಂತ ಮುಖದಲಿ ಹೊಮ್ಮಿ
ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು
ಎಲ್ಲೆಡೆ ಕಾಣುವ ಕಾಲ
ಬಯಕೆಯು ಅನಂತ ಮುಖದಲಿ ಹೊಮ್ಮಿ
ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು
ಎಲ್ಲೆಡೆ ಕಾಣುವ ಕಾಲ
ಬಳ್ಳಿಯು ಹೆಮ್ಮರ ಆಸರೆ ಕೋರಿ
ತೋಳನು ಬಳಸುವ ಕಾಲ
ತೋಳನು ಬಳಸುವ ಕಾಲ
ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಯಾವುದೋ ಮೋಡಿಯ ಮಾದಕ
ನಿಶೆಯಲಿ ಎಲ್ಲವೂ ಇಂದ್ರಜಾಲ
ಮಾಯೆಯೇ ಅಪ್ಪುಗೆ ಕೈಸೆರೆಯಲ್ಲಿ
ಅಳಿಯದ ವಸಂತ ಕಾಲ
ಪ್ರೇಮವೋ ಪ್ರೀತಿಯೋ ಪ್ರಣಯವೋ
ಏನೋ ಲೀಲೆಯನಾಡುವ ಕಾಲ
ಲೀಲೆಯನಾಡುವ ಕಾಲ
ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }