kannada lyrics
ಮರುಭೂಮಿ ನಡುವಲ್ಲಿ ಕಂಡ ಓ ಚಿಲುಮೆಯೇ
ಕನಸುಗಳ ರಾಶಿಯನು ತಂದ ಓ ಚೆಲುವೆಯೇ
ಒಣ ಒಂಟಿ ಜೀವದ ಕೂಗಿಗೆ
ತಂಗಾಳಿ ತಂದ ಓ ದೈವವೇ
ನಿನಗೇನು ನಾನು ನೀಡಲೇ
ಜಗವೇ ನೀನು ಗೆಳತಿಯೇ
ನನ್ನ ಜೀವದ ಒಡತಿಯೇ
ಉಸಿರೇ ನೀನು ಗೆಳತಿಯೇ
ನನ್ನನ್ನು ನಡೆಸೋ ಸಾಥಿಯೇ (X2)
ಜಗವೇ ನೀನು
ಖುಷಿ ಎಲ್ಲ ಕಲೆ ಹಾಕಿ
ನಿನಗಾಗಿ ನಾನು ಹೊತ್ತು ತರುವೆ
ನಿನ್ನ ಕನಸೆಲ್ಲ ನಾ ನನಸು ಮಾಡುವೆ
ಯಾರಿರಲಿ ಎದುರಲ್ಲಿ ನಾನೆಂದು ನಿನ್ನ ಮುಂದೆ ನಿಲ್ಲುವೆ
ನೋವೇ ಬರದಂತೆ ಪ್ರತಿ ನಿಮಿಷ ಕಾಯುವೆ
ನಡೆಯುವೆ ಜೊತೆ ನೆರಳಂತೆ
ಬಯಸುವೆ ಕೊನೆ ಇರದಂತೆ
ಮುಳುಗಡೆಯ ಭೀತಿಯ ಬದುಕಿಗೆ
ನೆರವಾಗಿ ಬಂದ ಓ ದೈವವೇ
ನಿನಗೇನು ನಾನು ನೀಡಲೇ
ಜಗವೇ ನೀನು ಗೆಳತಿಯೇ
ನನ್ನ ಜೀವದ ಒಡತಿಯೇ
ಉಸಿರೇ ನೀನು ಗೆಳತಿಯೇ
ನನ್ನನ್ನು ನಡೆಸೋ ಸಾಥಿಯೇ (X3)
ಜಗವೇ ನೀನು
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }