Kaveramma Kapadamma Song Lyrics


Movie:  Solillada Saradara
Music : Hamsalekha
Vocals :  S. P. Balasubrahmanyam
Lyrics :   Hamsalekha
Year: 1992
Director: Om Sai Prakash
 

kannada lyrics

ಕಾವೇರಮ್ಮ ಕಾಪಾಡಮ್ಮ

ಈ ದೋಣಿಯ ತೇಲಿಸು..

ಆ ತೀರವ ಸೇರಿಸು.. ಓ…

ಕಾವೇರಮ್ಮ ಕಾಪಾಡಮ್ಮ

ಈ ದೋಣಿಯ ತೇಲಿಸು..

ಆ ತೀರವ ಸೇರಿಸು..

ತಾಯೊಡಲೆ ನಿನಗೆ ಶರಣು

ಕಾವೇರಮ್ಮ ಕಾಪಾಡಮ್ಮ

ಈ ದೋಣಿಯ ತೇಲಿಸು..

ಆ ತೀರವ ಸೇರಿಸು..

ಮುಗಿಲಾಗುವೆ ಹನಿಯಾಗುವೆ

ಮಳೆಯಾಗಿ ಹೊಳೆಯಾಗಿ ಹರಿದಾಡುವೆ

ನಿತ್ಯ ನಲಿದಾಡುವೆ

ಉಸಿರಾಗುವೆ ಹಸಿರಾಗುವೆ

ಬರ ನೀಗಿ ತಂಪಾಗಿ ಕಡಲಾಗುವೆ

ಅಲ್ಲಿ ಅಲೆಯಾಗುವೆ

ಎಲ್ಲರ ಕಡು ಪಾಪವ

ಬಯ್ಯದೆ ಕೊಂಡೊಯ್ಯುವ

ತಾಯೊಡಲೆ ನಿನಗೇ ಶರಣು..

ಕಾವೇರಮ್ಮ ಕಾಪಾಡಮ್ಮ

ಈ ದೋಣಿಯ ತೇಲಿಸು..

ಆ ತೀರವ ಸೇರಿಸು.. ಓ…

ಜೇನಲ್ಲೂ ನೀ ತೆಂಗಲ್ಲೂ ನೀ

ನೆಲಯೋಗಿ ಉಳುವಾಗ ಬೆವರಲ್ಲೂ ನೀ

ಅವನ ಫಲದಲ್ಲೂ ನೀ

ಕಣ್ಣಲ್ಲೂ ನೀ ಎದೆಯಲ್ಲೂ ನೀ

ಹಸುಗೂಸು ತೊದಲಾಡೊ ಜೋಲ್ಲಲ್ಲೂ ನೀ

ನುಡಿ ಜೇನಲ್ಲೂ ನೀ

ನಿಲ್ಲದ ಸಂಚಾರದ

ಸಾವಿರ ಅವತಾರದ

ತಾಯೊಡಲೆ ನಿನಗೇ ಶರಣು

ಕಾವೇರಮ್ಮ ಕಾಪಾಡಮ್ಮ

ಈ ದೋಣಿಯ ತೇಲಿಸು..

ಆ ತೀರವ ಸೇರಿಸು..

ತಾಯೊಡಲೆ ನಿನಗೇ ಶರಣು

ಕಾವೇರಮ್ಮ ಕಾಪಾಡಮ್ಮ

ಈ ದೋಣಿಯ ತೇಲಿಸು..

ಆ ತೀರವ ಸೇರಿಸು..

Leave a Comment