Premavendarenu Helabaradenu Lyrics


Movie:  Solillada Saradara
Music : Manjula Gururaj
Vocals :  Hamsalekha
Lyrics :   Hamsalekha
Year: 1992
Director: Om Sai Prakash
 

kannada lyrics

ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು

ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ

ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು

ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ

ದೇವರ ಪ್ರೀತಿಸುವ ಪ್ರೇಮಿಗೆ ಸೋಲುಂಟೇ
ಏನಿದೆ ಹುಸಿ ಕಾರಣ..
ರುಕ್ಮಿಣಿ ಮನ ನೋಯಲೂ…

ದೇವರ ಪೂಜಿಸುವ ವಿರಹಿಗೆ ಸುಖವುಂಟೇ
ರಾಧೆಯ ಸುಖಕ್ಕಾಗಿಯೇ…
ರುಕ್ಮಿಣಿ ಮುಂದಾದಳು…

ಆ ರಾಧೆ ಯೋಚಿಸಿದ ಕಥೆ ಬೇರೆ
ಆ ರುಕ್ಮಿಣಿ ಪಾಲಿಸಿದ ವೃತ ಬೇರೆ

ಆ ರುಕ್ಮಿಣಿ ಏನೇ ಹೇಳಿದರು ಕೃಷ್ಣನಿಗೆ ಸ್ವಂತ
ಆ ರಾಧೆಯು ಎಷ್ಟೇ ಹಾಡಿದರು ರುಕ್ಮಿಣಿಗೆ ಸ್ವಂತ

ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು

ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ

ಹೃದಯದ ಒಳಗೊಂದು ನಾಲಿಗೆ ಮೇಲೊಂದು
ಪ್ರೇಮದ ಕಥೆ ಹೇಳುವ…
ಆಸೆಯ ಬಿಡು ಗೆಳತಿಯೇ…

ದ್ವಾಪರ ಯುಗವಲ್ಲ ಕಲಿಯುಗವೀಗಮ್ಮ
ಒಬ್ಬನ ಒಲವೆಂದಿಗೂ…
ಒಬ್ಬಳಿಗೇ ಗೆಳತಿಯೇ…

ಈ ಕೃಷ್ಣ ಮೆಚ್ಚುವುದೂ ನಿನ್ನ ತಾನೇ
ನೀ ಮೆಚ್ಚೋ ನಾಯಕನು ಕೃಷ್ಣ ತಾನೇ

ಆ ಕನಸಿನ ಮೇಲೆ ನಾನಿಲ್ಲಾ
ಅವನೆಂದಿಗೂ ನಿನ್ನವನು
ಈ ಕರುಣೆಯು ನನಗೆ ಬೇಕಿಲ್ಲಾ
ಅವನೆಂದಿಗೂ ನಿನ್ನವನೂ

ಪ್ರೇಮವೆಂದರೇನು ಹೇಳಬಾರದೇನು
ತ್ಯಾಗವೆಂದರೇನು ಹೇಳಬಾರದೇನು

ಪ್ರೇಮಕ್ಕೆಂದು ಸಾಕ್ಷಿಯೇ
ಕೃಷ್ಣ ರುಕ್ಮಿಣಿ ಜೋಡಿಯು
ತ್ಯಾಗಕ್ಕೆಂದು ಸಾಕ್ಷಿಯೇ
ರಾಧಾಕೃಷ್ಣ ವಿಯೋಗವೂ

Leave a Comment