Yarele Ninna Mechidavanu lyrics


Movie:  Sipayi
Music:Hamsalekha
Vocals :  S. Janaki And Mano
Lyrics :   Hamsalekha
Year: 1996
Director: Ravichandran
 

kannada lyrics

ಯಾರೆಲೆ ನಿನ್ನ ಮೆಚ್ಚಿದವನು
ಯಾರೆಲೆ ಕೆನ್ನೆ ಕಚ್ಚುವವನು
ಯಾರೆಲೆ ಮಲ್ಲೆ ಮೂಡಿಸುವವನು
ಯಾರೆಲೆ ಸೆರಗ ಎಳೆಯುವವನು

ಹೇಳೇ ಹುಡುಗಿ
ಹೇಳೇ ಬೆಡಗಿ
ನಿನ್ನ ಸೆರಗ ಎಳೆಯೋ ಹುಡುಗ ನಾನು ತಾನೇ
ನಿನ್ನ ಗಂಡ ನಾನೇ

ಇಲ್ಲ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಜೀವದ ಗೊಂಬೆ ನಾನಮ್ಮ
ಭೀಮನೆಂಬ ಮಣ್ಣು ಗೊಂಬೆ ಯಾಕಮ್ಮ

ಗೊಂಬೆ ಬೇಕು ಪೂಜೆಗೆ
ಪೂಜೆ ಬೇಕು ಮನಸಿಗೆ
ಮನಸು ಬೇಕು ಪ್ರೀತಿಗೆ
ಪ್ರೀತಿ ಬೇಕು ಹೆಣ್ಣಿಗೆ

ಯಾರೆಲೆ ನೀನು ಮೆಚ್ಚಿದವನು
ಯಾರೆಲೆ ತಾಳಿ ಕಟ್ಟುವವನು
ಯಾರೆಲೆ ನಿನ್ನ ಕಾಡುವವನು
ಯಾರೆಲೆ ನಿನ್ನ ಕೂಡುವವನು

ಹೇಳೇ ಹುಡುಗಿ
ಹೇಳೇ ಬೆಡಗಿ
ನಿನ್ನ ಉಸಿರು ಹೇಳೋ ಹೆಸರು ನಂದು ತಾನೇ
ನಿನ್ನ ಗಂಡ ನಾನೇ

ಇಲ್ಲ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಸಾವಿರ ಜನ್ಮ ಬರಲಮ್ಮ
ನನ್ನ ಪ್ರೀತಿ ನನ್ನ ಪ್ರಾಣ ನೀನಗಮ್ಮ

ಚಂದಮಾಮ ಅಲ್ಲಿದೆ
ನೈದಿಲೆ ಹೂ ಇಲ್ಲಿದೆ
ಚಂದ್ರನೇ ಇಲ್ಲಿಗೆ ಬಂದರೆ
ಹೂವಿಗೆ ಭಯವಾಗದೆ

ಯಾರೆಲೆ ನಿನ್ನ ಮುದ್ದು ಗಂಡ
ಯಾರೆಲೆ ನಿನ್ನ ತುಂಟ ಗಂಡ
ಯಾರೆಲೆ ನಿನ್ನ ವೀರ ಗಂಡ
ಯಾರೆಲೆ ನಿನ್ನ ಧೀರ ಗಂಡ

ಹೇಳೇ ಹುಡುಗಿ
ಹೇಳೇ ಬೆಡಗಿ
ವೀರ ಧೀರ ಜೋಕುಮಾರ ನಾನು ತಾನೇ
ನಿನ್ನ ಗಂಡ ನಾನೇ

ಇಲ್ಲ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

Leave a Comment