Halliyadarenu Shiva Lyrics


Movie:  Mayor Muthanna
Music : Rajan-nagendra
Vocals :  P. B. Sreenivas
Lyrics :   Chi. Udaya Shankar
Year: 1969
Director: Siddalingaiah
 

kannada lyrics

ಹಳ್ಳಿಯಾದರೇನು ಶಿವ
ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ
ಎಲ್ಲಾ… ನಿನ್ನಂತೆ ಶಿವ
ಜಗವೆಲ್ಲಾ ನಿನ್ನದೇ ಶಿವ

ಎಲ್ಲಾ ಸಂಪತ್ತನಿತ್ತೆ
ಎಲ್ಲರಿಗೆಂದೇ ಕೊಟ್ಟೆ
ಎಲ್ಲಾ ಸಂಪತ್ತನಿತ್ತೆ
ಎಲ್ಲರಿಗೆಂದೇ ಕೊಟ್ಟೆ

ಹಂಚಿಕೊಂಡು ಬಾಳಲರಿಯದ
ದುರಾಸೆ ಜನ
ವಂಚನೆಯ ಮಾಡುತಿರುವರೋ…

ಬಡವರನ್ನು ತುಳಿದು
ಅಹಂಕಾರದಲ್ಲಿ ಮೆರೆದು

ಅನ್ಯಾಯ ಮಾಡುತಿರುವರೋ

ಹಳ್ಳಿಯಾದರೇನು ಶಿವ
ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ
ಎಲ್ಲಾ ನಿನ್ನಂತೆ ಶಿವ..
ಜಗವೆಲ್ಲಾ ನಿನ್ನದೇ ಶಿವ

ಮಹಡಿಯಲ್ಲಿದ್ದರೇನು
ಗುಡಿಸಲಲ್ಲಿದ್ದರೇನು
ಮಹಡಿಯಲ್ಲಿದ್ದರೇನು
ಗುಡಿಸಲಲ್ಲಿದ್ದರೇನು

ಹಸಿವಿಗೇ ಅನ್ನ ತಿನ್ನದೇ
ಚಿನ್ನವನ್ನು ತಿನ್ನಲು ಸಾಧ್ಯವೇನು

ಸ್ವಾರ್ಥದಿಂದ ಕೂಡಿ
ಏನೇನೋ ಆಟವಾಡಿ
ಬರಿಗೈಲಿ ಕಡೆಗೆ ನಡೆವರು

ಹಳ್ಳಿಯಾದರೇನು ಶಿವ
ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ
ಎಲ್ಲಾ ನಿನ್ನಂತೆ ಶಿವ
ಜಗವೆಲ್ಲಾ ನಿನ್ನದೇ ಶಿವ
ಎಲ್ಲ ನಿನ್ನಂತೆ ಶಿವ
ಜಗವೆಲ್ಲಾ ನಿನ್ನದೇ ಶಿವ

Leave a Comment