Onde naadu onde kulavu lyrics


Movie:  Mayor Muthanna
Music : Rajan-nagendra
Vocals :  P. B. Sreenivas
Lyrics :   Chi. Udaya Shankar
Year: 1969
Director:Siddalingaiah
 

kannada lyrics

ಒಂದೇ ನಾಡು

ಒಂದೇ ಕುಲವು

ಒಂದೇ ದೈವವು

ಒಂದೇ ನಾಡು ಒಂದೇ ಕುಲವು

ಒಂದೇ ದೈವವು

ಒಂದೇ ನಾಡು ಒಂದೇ ಕುಲವು

ಒಂದೇ ದೈವವ

ಒಮ್ಮನದಿಂದ ದುಡಿದರೆ ಎಲ್ಲರು

ಜಗವನೆ ಗೆಲ್ಲುವೆವು

ಒಂದೇ ನಾಡು ಒಂದೇ ಕುಲವು

ಒಂದೇ ದೈವವು

ಬಡವ ಬಲ್ಲಿಗನೆಂಬ

ಆ ಬೇದ ದೇವರಿಗಿಲ್ಲ

ಗಾಳಿ ಬೆಳಕು ನೀರು

ನಮಗಾಗಿ ನೀಡಿಹನಲ್ಲ

ಆತನ ಮಕ್ಕಳು ತಾನೆ

ಈ ಶೃಷ್ಠಿಯ ಜೀವಿಗಳೆಲ್ಲ

ಈ ನಿಜ ಅರಿತರೆ ಎಲ್ಲ

ಕಷ್ಟವೆ ನಮಗಿನ್ನಿಲ್ಲ
ಜಡತೆಯ ನೀಗೋಣಾ

ಏಳಿರಿ ದುಡಿಯೋಣಾ

ಎಲ್ಲರು ಶ್ರಮಿಸಿ ನಮ್ಮೀ ನೆಲವನು

ಸ್ವರ್ಗವ ಮಾಡೋಣಾ

ಒಂದೇ ನಾಡು ಒಂದೇ ಕುಲವು

ಒಂದೇ ದೈವವು

ಒಮ್ಮನದಿಂದ ದುಡಿದರೆ ಎಲ್ಲರು

ಜಗವನೆ ಗೆಲ್ಲುವೆವು

ಒಂದೇ ನಾಡು ಒಂದೇ ಕುಲವು

ಒಂದೇ ದೈವವು

ಸತ್ಯ ಧರ್ಮಗಳೆರಡು

ನಮ್ಮ ಬಾಳಿನ ಕಣ್ಣಾಗಿರಲಿ

ಶಾಂತಿಯೆ ಉಸಿರಾಗಿರಲಿ

ಸೇವೆಯೆ ಗುರಿಯಾಗಿರಲಿ

ಬದುಕಲಿ ಏನೇ ಬರಲಿ

ಒಗ್ಗಟ್ಟಲಿ ನಂಬಿಕೆ ಇರಲಿ

ಕನ್ನಡತನ ಬಿಡೆನೆಂಬ

ಛಲವಿರಲಿ ಮನದಲ್ಲಿ

ಕನ್ನಡತನ ಬಿಡೆನೆಂಬ

ಛಲವಿರಲಿ ಮನದಲ್ಲಿ

ಭೇದವ ಅಳಿಸೋಣಾ

ಸ್ನೇಹವ ಬೆಳೆಸೋಣಾ

ಭೇದವ ಅಳಿಸೋಣಾ,

ಸ್ನೇಹವ ಬೆಳೆಸೋಣಾ

ಗುಡಿಸಲಿದಲ್ಲ ಗುಡಿಯೆ ಎಂದು

ಭಾವಿಸಿ ಬಾಳೋಣಾ

ಒಂದೇ ನಾಡು ಒಂದೇ ಕುಲವು

ಒಂದೇ ದೈವವು

ಒಮ್ಮನದಿಂದ ದುಡಿದರೆ ಎಲ್ಲರು

ಜಗವನೆ ಗೆಲ್ಲುವೆವು

ಒಂದೇ ನಾಡು ಒಂದೇ ಕುಲವು

ಒಂದೇ ದೈವವು

ಒಂದೇ ನಾಡು ಒಂದೇ ಕುಲವು

ಒಂದೇ ದೈವವು

Leave a Comment