kannada lyrics
ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ
ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೇ
ಜೀವಕ್ಕಿಂತ ಸನಿಹ ಬಾರೆ
ಒಲವೆ ವಿಸ್ಮಯ ಒಲವೆ ವಿಸ್ಮಯ
ನಿನ್ನ ಪ್ರೇಮ ರೂಪ
ಕಂಡು ನಾನು ತನ್ಮಯಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ ಬಾನಿಗೇರಿ
ಹಾರುವ ಬಾರ ಒಲವೆ ವಿಸ್ಮಯ……ಇರುಳಲ್ಲಿ ನೀನೆಲ್ಲೋ ಮೈ ಮುರಿದರೆ
ನನಗಿಲ್ಲಿ ನವಿರಾದ ಹೂ ಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ
ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ
ನಿನ್ನ ಕಣ್ಣ ತುಂಬಾ ಇರಲಿ ನನ್ನ ಬಿಂಬ
ಹೂವಿಗ ಬಣ್ಣ ತಂದವನೆ ಪರಿಮಳದಲ್ಲಿ
ಅರಳುವ ಬಾರೊ ಒಲವೆ ವಿಸ್ಮಯ…….
ಒಲವೆ ನೀನೊಲಿದ ಕ್ಷಣದಿಂದಲೆ
ಈ ಭೂಮಿ ಈ ಬಾನು ಹೊಸದಾಗಿದೆ
ಖುಷಿಯಿಂದ ಈ ಮನವೆಲ್ಲ
ಹೂವಾಗಿರೆ ಬೇರೇನು ಬೇಕಿಲ್ಲ ನೀನಲ್ಲದೆ
ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ ಮಳೆಯ
ಹನಿಯ ಮಾಲೆ …
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }