Ondonde Bachitta Maathu song lyrics


Movie:  Inti Nanna Prithiya
Music : Sadhu Kokila
Vocals :  Rajesh Krishna, Sriraksha Priyaram
Lyrics :   Yogaraj bhat
Year: 2008
Director: Duniya Suri
 

kannada lyrics

ಒಂದೊಂದೇ ಬಚ್ಚಿಟ್ಟ ಮಾತು

ಒಂದೊಂದಾಗಿ ಕೂಡಿಟ್ಟ ಕವನ

ನನ್ನಿಂದ ನಾ ದೂರ ನಿಂತು

ನಾಕಂಡೆ ಮಾತಾಡೋ ಮೌನ

ಸೋಲುವುದು ಹೃದಯ ಹೀಗೇಕೆ

ತಿಳಿತಿಳಿದು ನಗುವೆ ನೀನೇಕೆ

ಮಾತಾಡು ಓ ಮೌನ

ಮಾತಾಡು ಹೇ ಹೇ

ಒಂದೊಂದೇ ಬಚ್ಚಿಟ್ಟ ಮಾತು

ಒಂದೊಂದಾಗಿ ಕೂಡಿಟ್ಟ ಕವನ

ಓ ಸುಳ್ಳು ಸುಳ್ಳೇ ಮುನಿಸು

ಆ ನೂರು ಕಳ್ಳ ಕನಸು

ಆ ಮುಸ್ಸಂಜೆ ಮಪ್ಪಲ್ಲಿ

ಮುತ್ತಿಟೊರ್ಯಾರು

ಕೆನ್ನೆ ನಿಂದ ಮುತ್ತು ನಂದ

ಬಗೆ ಹರಿಯದ ಒಗಟು ಇದು

ಮೊದಲು ಅಪ್ಪಿಕೊಂಡ

ಆ ಮಧುರ ಮೌನದೊಳಗೆ

ಬಿಸಿ ಉಸಿರಲಿ ಮೊದಲು

ಹೆಸರ ಪಿಸುಗುಟ್ಟಿದ್ಯಾರು

ಈ ವಿರಹದಲಿ ಅಡಗಿದೆಯೋ

ಸನಿಹ ಸನಿಹದಲಿ ಯಾಕಿದೆ ವಿರಹ

ಹೇಳುವೆಯಾ

ಒಂದೊಂದೇ ಬಚ್ಚಿಟ್ಟ ಮಾತು

ಒಂದೊಂದಾಗಿ ಕೂಡಿಟ್ಟ ಕವನ

ನನ್ನಿಂದ ನಾ ದೂರ ನಿಂತು

ನಾ ಕಂಡೆ ಮಾತಾಡೋ ಮೌನ

ಹೋ ಹೋ ಸಣ್ಣ ತಪ್ಪಿಗಾಗಿ

ಮಾತು ಸತ್ತು ಹೋಗಿ

ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ಯರು

ತಪ್ಪು ನಿಂದ ತಪ್ಪು ನಂದ

ಕೊನೆಗಾಣದ ಒಗಟು ಇದು

ಮುಂಜಾನೆ ನಿದ್ರೆಯಲಿ

ನಾ ಹೇಳಲಾರದ ಕನಸ

ನೀ ಸಿಕ್ಕಗಾ ಮಾತಾಡೋ ಮಾತೆಲ್ಲ ಬೇರೆ

ಈ ಸುಳ್ಳನ್ನು ಕಲಿಸುವುದೇ ಕನಸು

ಅದನ್ಯಾಕೆ ಬಯಸಿದೆ ಮನಸು

ಒಂದೊಂದೇ ಬಚ್ಚಿಟ್ಟ ಮಾತು

ಒಂದೊಂದಾಗಿ ಕೂಡಿಟ್ಟ ಕವನ

ನನ್ನಿಂದ ನಾ ದೂರ ನಿಂತು

ನಾ ಕಂಡೆ ಮಾತಾಡೋ ಮೌನ …

Leave a Comment