Akka Nin Ganda Lyrics


Movie:  Halli Meshtru
Music : Hamsalekha
Vocals :  S. Janaki
Lyrics :   Hamsalekha
Year: 1996
Director: Mohan-manju
 

kannada lyrics

ಅಕ್ಕ ನಿನ್ ಗಂಡ ಹೆಂಗಿರ ಬೇಕುHamsalekha?
ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು
ನೀತಿಯಾಗಿ ಬಾಳಬೇಕು

ಓ ಓ ಓ ಓ ಓ
ಓ ಓ ಓ ಓ ಓ

ಅಕ್ಕ ನಿನ್ ಗಂಡ ಯಾರಿರಬೇಕು?
ಶ್ರೀ ರಾಮಚಂದ್ರ ಆಗಿರಬೇಕು
ಮಾತು ಬಾಣವಾಗಬೇಕು
ನ್ಯಾಯ ಪ್ರಾಣವಾಗಬೇಕು

ಓ ಓ ಓ ಓ ಓ
ಓ ಓ ಓ ಓ ಓ

ಹೆಣ್ಣು ನೋಡಲು ಬರುವಾಗ
ಗಾಡಿಯಲ್ಲಿ ಬರಬೇಕು
ಜೊತೆಯಲ್ಲಿ ಒಳ್ಳೆತನ ತರಬೇಕು

ಕಾಲು ಮೇಲೆ ಕಾಲು ಹಾಕಿ
ಡೌರಿಯನ್ನು ಕೇಳಬಾರದು
ಮದುವೆಗೆ ಕಾರು ಗೀರು ಅನ್ನಬಾರದು

ಬ್ರಾಂಡಿ ವಿಸ್ಕಿ ಬೀಡಿ ಸಿಗರೇಟ್
ಮೂಸಿಯೂ ಇರಬಾರದು
ಬೆತ್ತಲೆ ಸಿನಿಮಾ ನೋಡಬಾರದು

ಮೊದಲನೇ ಲಗ್ನ ಮೊದಲ ಒಸಗೆ
ನನ್ನಯ ಜೊತೆಯಲ್ಲೇ
ತಪ್ಪಿದ ಗಂಡನ ನಾ ಒಲ್ಲೆ

ಅಪ್ಪಟ ಚಿನ್ನದ ಗಂಡ ಸಿಕ್ಕಲು ನನಗೆ ಯೋಗ ಕೂಡಬೇಕು
ಗಾಳಿಯ ಗೋಪುರದಲ್ಲಿ ಅಲ್ಲಿಯವರೆಗೆ ದಿನವೂ ಕಾಯಬೇಕು

ಅಕ್ಕ ನಿನ್ ಗಂಡ ಹೆಂಗಿರ ಬೇಕು?
ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು
ನೀತಿಯಾಗಿ ಬಾಳಬೇಕು

ಓ ಓ ಓ ಓ ಓ
ಓ ಓ ಓ ಓ ಓ

ತಾಳಿ ಕಟ್ಟಿ ಆದಮೇಲೆ
ತಾಳುವಂತೆ ಬಯ್ಯಬೇಕು
ತಕ್ಷಣವೇ ಮುದ್ದು ಮಾಡಿ ನಗಿಸಬೇಕು

ಅಕ್ಕ ಪಕ್ಕದ ಜನರೆದುರು
ನನ್ನ ಮೆಚ್ಚಿಕೊಳ್ಳಬೇಕು
ನಮ್ಮಿಬ್ಬರ ಊರು ನೋಡಿ ಕರಗಬೇಕು

ಸಿನಿಮಾ ಟೆಂಟು ಸಂತೆಯಲ್ಲಿ
ಕೈ ಹಿಡಿದಿರಬೇಕು
ಪೋಲಿಗಳ ಕಾಟಕ್ಕೆ ಒದಿ ಬೇಕು

ತಿಂಗಳಿಗೊಮ್ಮೆ ಮೂರು ದಿನವೂ
ಅಡಿಗೆಯ ಮಾಡಬೇಕು
ಅಂತವನಿಗೆ ದಾಸಿಯಾಗಬೇಕು

ಜರಿಗೆಯಾ ಸೀರೆಯ ಕೊಡಿಸಿ
ನೆರಿಗೆಯಾ ಬಿಡಿಸಿ
ಅವನೇ ಉಡಿಸಬೇಕು

ಮಲ್ಲಿಗೆ ದಿಂಡನು ಮುಡಿಸಿ
ಮುತ್ತನು ಸುರಿಸಿ
ಬಾಗಿಲು ಮುಚ್ಚಬೇಕು

ಅಕ್ಕ ನಿನ್ ಗಂಡ ಹೆಂಗಿರ ಬೇಕು?
ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು
ನೀತಿಯಾಗಿ ಬಾಳಬೇಕು

ಓ ಓ ಓ ಓ ಓ
ಓ ಓ ಓ ಓ ಓಅಕ್ಕ ನಿನ್ ಗಂಡ ಯಾರಿರಬೇಕು?
ಶ್ರೀ ರಾಮಚಂದ್ರ ಆಗಿರಬೇಕು
ಮಾತು ಬಾಣ ವಾಗಬೇಕು
ನ್ಯಾಯ ಪ್ರಾಣ ವಾಗಬೇಕು

ಓ ಓ ಓ ಓ ಓ
ಓ ಓ ಓ ಓ ಓ

ಅಕ್ಕ ನಿನ್ ಗಂಡ

Leave a Comment

”
GO