Preethi Madu Thappenilla Song Lyrics


Movie:  Halli Meshtru
Music : Hamsalekha
Vocals :  K .J . Yesudas,S. Janaki
Lyrics :   Hamsalekha
Year: 1996
Director: Mohan-manju
 

kannada lyrics

ಪ್ರೀತಿ ಮಾಡು ತಪ್ಪೆನ್ನಿಲ್ಲ

ಅಂತಾ ಎಲ್ಲಾ ಹೇಳ್ತಾರಲ್ಲ

ಮನಸ ಮಾತ ಕೇಳಿ ಪ್ರೀತಿ ಮಾಡಿದೆ

ಪ್ರೀತಿ ಮಾತು ಕೇಳಿ ತಪ್ಪು ಮಾಡಿದೆ

ಅಂದು ಕೊಂಡ ಹಾಗೆ ಇಲ್ಲಿಲ್ಲಾ

ಕಟ್ಟಿಕೊಂಡ ಪುಣ್ಯಾ ಕೈಲಿಲ್ಲ

ಲಾಲಿ ಲಾಲಿ ಸುವ್ವಾಲಿ ಜೋ ಜೋ

ಲಾಲಿ ಲಾಲಿ ಸುವ್ವಾಲಿ ಜೋ ಜೋ

ಪ್ರೀತಿ ಮಾಡು ತಪ್ಪೆನ್ನಿಲ್ಲ

ಅಂತಾ ಎಲ್ಲಾ ಹೇಳ್ತಾರಲ್ಲ

ಮರಗಿಡಕೂನೂ ಮನಸುಂಟು

ನೆರಳಿರುವಾಗ ಬಯಲುಂಟು

ನಾ ಮೆಚ್ಚಿಕೊಂಡಿರೋ

ನಾ ಹಚ್ಚಿಕೊಂಡಿರೋ

ದೇವರು ಕಲ್ಲಾ

ಎಡವಿದ ಮೇಲೆ ನೋವುಂಟು

ದುಡಕಿದ ಮೇಲೆ ವ್ಯಥೆಯುಂಟು

ಸುಳ್ಳಿನ ಮಾಲೆ ಕಟ್ಟಿದ ಮೇಲೆ ವಾಸನೇ ಇಲ್ಲಾ

ತೌರು ಬಿಟ್ಟ ಮೇಲೆ ಗಂಡನಲ್ಲವೇ

ಗಂಡ ಬಿಟ್ಟ ಮೇಲೆ ಸಾವು ಅಲ್ಲವೇ

ಇಷ್ಟವಿಲ್ಲ ಎಂದಾಗ ಹಾಡಬಾರದು,

ಪ್ರೀತಿ ಇಲ್ಲ ಎಂದಾಗ ಕೇಳಬಾರದು

ಯಾರ ಮಾತ ಕೇಳಿ ಪ್ರೀತಿ ಮಾಡಿದೆ

ಮನಸ ಮಾತ ಕೇಳಿ ಪ್ರೀತಿ ಮಾಡಿದೆ

ಅಂದುಕೊಂಡ ಹಾಗೆ ಇಲ್ಲಿದೆಯಾ

ಕಟ್ಟಿಕೊಂಡ ಪುಣ್ಯಾಟ ಕೈಲಿಲ್ಲ

ಲಾಲಿ ಲಾಲಿ ಸುವ್ವಾಲಿ ಜೋ ಜೋ

ಲಾಲಿ ಲಾಲಿ ಸುವ್ವಾಲಿ ಜೋ ಜೋ

ಪ್ರೀತಿ ಮಾಡು ತಪ್ಪೆನ್ನಿಲ್ಲ

ಅಂದರಿಲ್ಲಿ ಅರ್ಥ ಇಲ್ಲಾ

ಮನಸಿಗೆ ನೋವೇ ಜೊತೆ ಇಲ್ಲ

ಬಯಕೆಗೆ ಸಾಕು ಮಿತಿ ಎಲ್ಲಿ

ಬಾ ಎಂದ ಕೂಡಲೇ

ನೀಡೆಂದರಿಗಲೇ ಪ್ರೀತಿಯು ಬರದು

ಕರುಣೆಯ ಮೇಲೆ ಕನಸಿಲ್ಲಿ

ಮರುಕದ ಮೇಲೆ ಬದುಕೆಲ್ಲ

ಮನ್ನಿಸಿಬಿಟ್ಟರೆ ಪ್ರೀತಿಯ ಕೊಟ್ಟರೇ

ಚಿಂತೆಯೇ ಇರದು

ಹೂವು ಎಂದು ತಾನಾಗಿ ಅರಳ ಬೇಕಮ್ಮಾ

ಪ್ರೀತಿ ಎಂದು ತಾನಾಗಿ ಹುಟ್ಟಬೇಕಮ್ಮಾ

ನನ್ನ ಎದೆ ಗೂಡಲ್ಲಿ ನೀನೇ ಮಲ್ಲಿಗೆ

ಪ್ರೇಮ ಗಂಧ ನೀ ಚೆಲ್ಲು ಅಲ್ಲಿ ಮೆಲ್ಲಗೆ

ಯಾರ ಮಾತಾ ಕೇಳಿ ಪ್ರೀತಿ ಮಾಡಿದೆ

ಮನಸ ಮಾತ ಕೇಳಿ ಪ್ರೀತಿ ಮಾಡಿದೆ

ಅಂದುಕೊಂಡ ಹಾಗೆ ಇಲ್ಲಿಲ

ಕಟ್ಟಿಕೊಂಡ ಪುಣ್ಯಾ ಕೈಲಿಲ್ಲ

ಲಾಲಿ ಲಾಲಿ ಸುವ್ವಾಲಿ ಜೋ ಜೋ

ಲಾಲಿ ಲಾಲಿ ಸುವ್ವಾಲಿ ಜೋ ಜೋ

Leave a Comment