Aa Deva Roopisida lyrics in Kannada


Movie:  Aduva Gombe
Music : Hemanth Kumar
Vocals :  Puneeth Rajkumar
Lyrics :   S. K. Bhagavan
Year: 2019
Director: Dorai-Bhagwan
 

kannada lyrics

ಹೇಹೇ… ಹೇಹೇ… ಆಹಾ…

ಆ ದೇವ ರೂಪಿಸಿದ ಅಂದದ ಗೊಂಬೆ

ಮೈ ಮನ ಮರೆಸುವ ಮುದ್ದಾದ ಗೊಂಬೆ

ಮುದ್ದಾದ ಗೊಂಬೆ

ಕಣ್ ತುಂಬಾ ಸೌಂದರ್ಯದ ಸುಂದರ ಗೊಂಬೆ

ನಾವಲ್ಲವೇ ಅವನೇ ಆಡಿಸೋ ಗೊಂಬೆ

ಆಡಿಸೋ ಗೊಂಬೆ ಆಡುವ ಗೊಂಬೆ

ತನುವ ತಣಿಸುವ ಚಂದದ ಗೊಂಬೆ

ಜಕ್ಕಣ್ಣ ಕೆತ್ತಿದ ಶಿಲ್ಪದ ಗೊಂಬೆ

ಸಂತೋಷವೇ ತುಂಬಿ ನಲಿವ ಗೊಂಬೆ

ನಾವಲ್ಲವೇ ಅವನೇ ಆಡಿಸೋ ಗೊಂಬೆ

ಆಡಿಸೋ ಗೊಂಬೆ ಆಡುವ ಗೊಂಬೆ

ಏಹೇ ತಾನಾನ ನಾನಾ ನಾನನ

ಏ ಹೇ ತಾನಾನ ನಾನಾ ನಾನನ

ಏಹೇ ತಾನಾನ ನಾನಾ ನಾನನ

ಏಹೇ ತಾನಾನ ನಾನಾ ನಾನನ

ಏ ಹೇ ತಾನಾನ ನಾನಾ ನಾನನ

ನೀಲಿಯ ಬಾನಲ್ಲಿ ಹಾರುವ ಗೊಂಬೆ

ಕೋಗಿಲೆ ಕಂಠದಿ ಹಾಡುವ ಗೊಂಬೆ

ಮಯೂರಿ ನಾಚಿಸುವ ನಾಟ್ಯದ ಗೊಂಬೆ

ನಾವಲ್ಲವೇ ಅವನೇ ಆಡಿಸೋ ಗೊಂಬೆ

ಆಡಿಸೋ ಗೊಂಬೆ ಆಡುವ ಗೊಂಬೆ

ಎಂದಿಗೂ ಕುಂದದ ದಂತದ ಗೊಂಬೆ

ಆನಂದ ಸಾಗರದಿ ತೇಲುವ ಗೊಂಬೆ

ನಿಸರ್ಗ ಹಸಿರಾಗಿ ಹೊಳೆವ ಗೊಂಬೆ

ನಾವಲ್ಲವೇ ಅವನೇ ಆಡಿಸೋ ಗೊಂಬೆ

ಆಡಿಸೋ ಗೊಂಬೆ ಆಡುವ ಗೊಂಬೆ

Leave a Comment