Yaava Hoovu Yaara Mudigo lyrics


Movie:  Besuge
Music : Vijaya Bhaskar
Vocals :  S. P. Balasubrahmanyam
Lyrics :   Shyamsundar Kulkarni
Year: 1976
Director: Geethapriya
 

kannada lyrics

ಯಾವ ಹೂವು ಯಾರ ಮುಡಿಗೋ

ಯಾರ ಒಲವು ಯಾರ ಕಡೆಗೋ

ಯಾವ ಹೂವು ಯಾರ ಮುಡಿಗೋ

ಯಾರ ಒಲವು ಯಾರ ಕಡೆಗೋ

ಇಂತ ಪ್ರೇಮದಾಟದೇ ಯಾರ ಹೃದಯ ಯಾರಿಗೋ

ಯಾವ ಹೂವು ಯಾರ ಮುಡಿಗೋ

ಯಾರ ಒಲವು ಯಾರ ಕಡೆಗೋ

ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ

ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ

ಒಂದು ಮನದ ಯೋಚನೆ ಒಂದು ಮನಕೆ ಸೂಚನೆ

ಯಾರು ಅರಿಯಲಾರರು ಯಾರ ಪಾಲು

ಯಾರಿಗೋ ಯಾರಿಗೋ

ಯಾವ ಹೂವು ಯಾರ ಮುಡಿಗೋ

ಯಾರ ಒಲವು ಯಾರ ಕಡೆಗೋ

ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು

ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು

ಮೋಹ ಪಾಶ ಎಸೆಯಿತು ಒಂದು ಪಾಠ ಕಳಿಸಿತು

ಇಂತ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ

ಯಾವ ಹೂವು ಯಾರ ಮುಡಿಗೋ

ಯಾರ ಒಲವು ಯಾರ ಕಡೆಗೋ

ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು

ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು

ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು

ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ

ಯಾವ ಹೂವು ಯಾರ ಮುಡಿಗೋ

ಯಾರ ಒಲವು ಯಾರ ಕಡೆಗೋ

ಇಂತ ಪ್ರೇಮದಾಟದೇ ಯಾರ ಹೃದಯ ಯಾರಿಗೋ

ಯಾವ ಹೂವು ಯಾರ ಮುಡಿಗೋ

ಯಾರ ಒಲವು ಯಾರ ಕಡೆಗೋ

Leave a Comment