kannada lyrics
ನೀನು ಬಗೆಹರಿಯದ ಹಾಡು
ನೋಡು ಹದಿಹರೆಯದ ಪಾಡು
ಈ ವಿಷಯದಿ ನನಗೆ
ಅನುಭವವು ಕಮ್ಮಿ
ಎಷ್ಟೆಂದರು ನಾನು
ಉದಯೋನ್ಮುಖ ಪ್ರೇಮಿ
ಇದು ಖಾಸಗಿ ಕಾರ್ಯಕ್ರಮ
ಇನ್ನೇನಿಲ್ಲ
(ಮ್ಯೂಸಿಕ್)
ನೀನು ಬಗೆಹರಿಯದ ಹಾಡು
ನೋಡು ಹದಿಹರೆಯದ ಪಾಡು
(ಮ್ಯೂಸಿಕ್)
ನನಗಷ್ಟೇ ನೀನು
ಕೊಡುವಾಗ ಪಾಠ
ಹೃದಯನೇ ನನ್ನ
ಗುರುದಕ್ಷಿಣೆ
ತುಟಿ ಕಚ್ಚಿ ಆಹಾ
ಬರೆವಾಗ ನೀನು
ನನಗಂತು ಬೇಕು
ಹಿತರಕ್ಷಣೆ
ಕನಸಂತು ಈಗ
ಚಿರಪರಿತ ಊರು
ಹುಚ್ಚಾದರೆ ಪೂರ್ತಿ
ಹೊಣೆಗಾರರು ಯಾರು
ದಯಪಾಲಿಸು ಕಿರು ಕಾಳಜಿ
ಇನ್ನೇನಿಲ್ಲಾ
(ಮ್ಯೂಸಿಕ್)
ನೀನು ಬಗೆಹರಿಯದ ಹಾಡು
(ಮ್ಯೂಸಿಕ್)
ಏಕಾಂಗಿಯಾದ
ನಿನ ಕೋಣೆಯಲ್ಲಿ
ನಾನಾಗಬೇಕು
ನಿಲುಗನ್ನಡಿ
ಅಥವಾ ನೀ ಬಂದು
ರುಚಿ ನೋಡಿ ನೋಡಿ
ಚೌಕಾಸಿ ಮಾಡೊ
ಸಿಹಿಯಂಗಡಿಜೊತೆ ಸೇರಿಸಿ ಹೆಸರಾ
ಬರೆದಲಿಸುವ ಗೀಳು
ಮುಖ ಮರೆಸುವ ಹೇರಳ
ಬದಿಸರಿಸಲೇ ಹೇಳು ?
ಪಠ್ಯೇತರ ಚಟುವಟಿಕೆಯು
ಇನ್ನೇನಿಲ್ಲ
(ಮ್ಯೂಸಿಕ್)
ನೀನು ಬಗೆಹರಿಯದ ಹಾಡು
ನೋಡು ಹದಿಹರೆಯದ ಪಾಡು
(ಹಾಡು ಮುಕ್ತಯ)
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }